Thursday 23 June 2011

ನಾಳೆ ಜುಗಾರಿಕ್ರಾಸ್ - ರಂಗಶಂಕರದಲ್ಲಿ

ನಾಳೆ 
ಜುಗಾರಿಕ್ರಾಸ್ 
ರಂಗಶಂಕರದಲ್ಲಿ
ಸಂಜೆ ೭.೩೦ಕ್ಕೆ
ಟಿಕೆಟ್ ರೂ ೭೦/- ಮಾತ್ರ
ಶುಕ್ರವಾರ ಸಮುದಾಯ ಬೆಂಗಳೂರು ತಂಡದಿಂದ 50ಕ್ಕೂ ಹೆಚ್ಚು ಪ್ರದರ್ಶನ ಕಂಡ `ಜುಗಾರಿ ಕ್ರಾಸ್
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಯವರ ಇದೇ ಹೆಸರಿನ ಕಾದಂಬರಿಯನ್ನು 
ನಟರಾಜ ಹೊನ್ನವಳ್ಳಿ 
ರಂಗ ರೂಪಗೊಳಿಸಿ, 
ರಂಗ ವಿನ್ಯಾಸ ಮಾಡಿ 
ನಿರ್ದೇಶಿಸಿದ್ದಾರೆ.
 ಸಂಗೀತ: ಗಜಾನನ ಟಿ. ನಾಯ್ಕ.
ನೋಡದಿದ್ದವರು ನೋಡಲೇಬೇಕಾದ ನಾಟಕ
ನೋಡಿದವರು ಮತ್ತೆ ಮತ್ತೆ ನೋಡಬೇಕೆನ್ನಿಸುವ ನಾಟಕ
ತಣ್ಣನೆಯ ಸಸ್ಪೆನ್ಸ್ ಡ್ರಾಮಾ
ಸಿನೇಮಾ ನೋಡುವ ಅನುಭವವನ್ನೂ ಮೀರಿಸುವ
ಜೀವಂತ ಪ್ರದರ್ಶನವಾದ ನಾಟಕದಲ್ಲಿ
ಸಸ್ಪೆನ್ಸ್ ಕಥೆ ನೋಡಿ ಥ್ರಿಲ್ ಆಗಲು
ಮರೆಯ ಬೇಡಿ. ನೀವೂ ಬನ್ನಿ
ಇತರರನ್ನೂ ಕರೆದು ತನ್ನಿ
ಕನ್ನಡ ಸಾಹಿತ್ಯ ಲೋಕದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ ತೇಜಸ್ವಿಯವರ ಜುಗಾರಿ ಕ್ರಾಸ್ ಒಂದು ವಿಶಿಷ್ಟ ಕಾದಂಬರಿ. ಕಾಡುಗಳ್ಳರ ಕಾಳದಂಧೆಗಳು, ತಮಗೆ ತಿಳಿಯದೇ ಇದರಲ್ಲಿ ಸಿಕ್ಕಿಕೊಳ್ಳುವ ಮುಗ್ದ ದಂಪತಿಯ ಕಷ್ಟ ಕೋಟಲೆಗಳು, ಬೆಚ್ಚಿಬೀಳಿಸುವ ಭೂಗತ ಪಾತಕ ಲೋಕದ ಮೇಲೆ ಇದು ಬೆಳಕು ಚೆಲ್ಲುತ್ತದೆ.
 ಕೇವಲ 24 ಘಂಟೆಗಳಲ್ಲಿ ನಡೆಯುವ ಒಂದು ರೊಮ್ಯೋಂಟಿಕ್ ಥ್ರಿಲ್ಲರ್, ಜೊತೆಗೆಯೇ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವದ ಸಾಮಾಜಿಕ ಚಿತ್ರಣವೂ ಹೌದು.

ಸ್ಥಳ: ರಂಗಶಂಕರ, ಜೆಪಿ ನಗರ 2ನೇ ಹಂತ. ಸಂಜೆ 7.30. ಟಿಕೆಟ್ ದರ 70 ರೂ. 

ಮುಂಗಡ ಬುಕಿಂಗ್‌ಗೆ: 99001 82400,www.indianstage.in




0 ಅಭಿಪ್ರಾಯಗಳು:

Post a Comment

Followers

ನನ್ನ ಸಂಗ್ರಹದ ಚಿತ್ರಗಳು

Loading...